ಎನಗೊಬ್ಬ ದೊರೆ ದೊರಕಿದನು ।।ಪ॥
ವನಜ ಸಂಭವನಯ್ಯ ಹನುಮನಂತರಾಸ್ವಾಮಿ ।।ಅ.ಪ॥
ಮಾತಾಪಿತನಾದ ಭ್ರಾತ ಬಾಂಧವನಾದ
ಪ್ರೀತಿಯಿಂದಲಿ ತಾನೆ ನಾಥನಾದ
ಖ್ಯಾತನು ತಾನಾದ ದಾತನು ತಾನಾದ
ಭೂತೇಶವಂದ್ಯ ವಿಭೂತಿಪ್ರದನಾದ ।।೧।।
ಪ್ರೀತಿಯಿಂದಲಿ ತಾನೆ ನಾಥನಾದ
ಖ್ಯಾತನು ತಾನಾದ ದಾತನು ತಾನಾದ
ಭೂತೇಶವಂದ್ಯ ವಿಭೂತಿಪ್ರದನಾದ ।।೧।।
ಅಜರಾಮರನಾದ ಅಪ್ರಾಕೃತನಾದ
ವಿಜಯಗೊಲಿದು ನಿಜಸೂತನಾದ
ಭುಜಗಶಯನನಾದ ತ್ರಿಜಗವಂದಿತನಾದ
ಅಜಾಮಿಳನ ಅಂತ್ಯಕತ್ಯಂತ ಸುಹೃದನಾದ ।।೨।।
ವಿಜಯಗೊಲಿದು ನಿಜಸೂತನಾದ
ಭುಜಗಶಯನನಾದ ತ್ರಿಜಗವಂದಿತನಾದ
ಅಜಾಮಿಳನ ಅಂತ್ಯಕತ್ಯಂತ ಸುಹೃದನಾದ ।।೨।।
ಶಂಖ ಚಕ್ರಾಂಕಿತ ಸಂಕರ್ಷಣನಾದ
ಬಿಂಕದಿಂದಲಿ ಬಿರುದು ಪೊತ್ತವನಾದ
ಪಂಕಜನಯನ ಮೀನಾಂಕ ಜನಕನಾದ
ಓಂಕಾರ ಮೂರುತಿ ಪುರಂದರವಿಠಲನಾದ ।।೪।।
ಬಿಂಕದಿಂದಲಿ ಬಿರುದು ಪೊತ್ತವನಾದ
ಪಂಕಜನಯನ ಮೀನಾಂಕ ಜನಕನಾದ
ಓಂಕಾರ ಮೂರುತಿ ಪುರಂದರವಿಠಲನಾದ ।।೪।।
No comments:
Post a Comment