Wednesday, 16 October 2019

ಈತನೆ ಕಾಣಿರೊ ಮಧ್ವಮುನಿ eetane kaniro madhwamuni

ಈತನೆ ಕಾಣಿರೊ ಮಧ್ವಮುನಿ ||
ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ
ಚರಿಸುತ್ತಹರಿಯೆ ಸರ್ವೋತ್ತಮನೆಂಬ
ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ ||
ಸಕಲಾಗಮಗಳೆಂಬ ಶರಧಿಯೊಳಗೆ
ಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ
ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ ||
ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡು
ಆದಿಮೂರುತಿ ಶ್ರೀ ಹಯವದನನ ದಿವ್ಯ
ಪಾದ ಸೇವಕನಾದ ಮಧ್ವಮುನಿಯೆಂಬಾತ ||

No comments:

Post a Comment