Tuesday, 29 October 2019

ಈ ಶರೀರದ ಭ್ರಾಂತಿ ಇನ್ನೇಕೆ ಮನವೆ ee sharirada branti

ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |
ವಾಸುದೇವನ ನೆನೆದು ಸುಖಿಯಾಗು ಮನವೆ ಪ.
ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು |
ಮೇಲೆ ಜವ್ವನ ಹೋಗಿ ಜರೆಯಾದಗಿತು ||
ಕಾಲ - ಕರ್ಮಾದಿಗಳು ಕೂಡಿದಾಕ್ಷಣದಲಿ |
ಬೀಳುವೀ ತನುವಿನೊಳ್ ಇನ್ನಾಸೆಯ ಮನವೆ 1
ದಂತಗಳು ಸಡಿಲಿದುವು ಧಾತುಗಳು ಕುಂದಿದುವು |
ಕಾಂತೆಯರು ಜರಿದು ಓಕರಿಸುವರು ||
ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |
ಸಂತತ ಶ್ರೀ ಹರಿಯ ನೆನೆ ಕಾಣೊ ಮನವೆ 2
ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ |
ಸಾರುತಿದೆ ನೀ ಮೆಚ್ಚಿ ಮರುಳಾಗದೆ ||
ಶ್ರೀರಮಣ ಪುರಂದರವಿಠಲನ ನೆನೆ ನೆನೆದು |
ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ 3

No comments:

Post a Comment