Wednesday, 16 October 2019

ದಾಸರೆಂದರೆ ಪುರಂದರದಾಸರಯ್ಯ Dasarendare purandaradasaru

ದಾಸರೆಂದರೆ ಪುರಂದರದಾಸರಯ್ಯ ||ಪ||
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ||ಅ.ಪ||
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು ದಾಸನೆಂದು ತುಲಸಿ ಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ ||1||
ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ ||2||
ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ||3||
ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿ
ಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,ತೂಟಕವ ಮಾಡಲವ ದಾಸನೇನೈಯ||4||
ನೀತಿಯೆಲ್ಲವನರಿತು ನಿಗಮವೇದ್ಯನ  ನಿತ್ಯ ವಾತಾಸುತನಲ್ಲಿಹನ ವರ್ಣಿಸುತ್ತಾ
ಗೀತಾ ನರ್ತನದಿಂದ ಕೃಷ್ಣಣ್ಣ ಪೂಜಿಸುವ ಪುಟಾತ್ಮ ಪುರಂದರ ದಾಸರಿವರೈಯ ||5||

No comments:

Post a Comment