Friday, 18 October 2019

ಇದಿರದಾವನು idiradavanu ninage dhareyolu

ಇದಿರದಾವನು ನಿನಗೀ ಧರೆಯೊಳು
ಪದುಮನಾಭನ ದಾಸ ಪರಮೋಲ್ಲಾಸಾ ||ಪ||
ವಾದಿತಿಮಿರಮಾರ್ತಾಂಡನೆಂದೆನಿಸಿದ
ವಾದಿಶರಭಭೇರುಂಡ ವ್ಯಾಸರಾಯಾ ||೧||
ಯತಿಗಳೊಳಗೆ ನಿಮ್ಮಂದದದವರುಗಳ
ಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ ||೨||
ಹಮ್ಮನಳಿದು ಶ್ರೀಪತಿ ರಂಗವಿಠಲನ್ನ
ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯಾ ||೩

No comments:

Post a Comment