Wednesday, 9 October 2019

ಭಕ್ತ ಪ್ರಹ್ಲಾದಗೆ ಆರುತಿ bhakth pralhadage Aarati

ಭಕ್ತ ಪ್ರಹ್ಲಾದಗೆ ಆರುತಿ ಮಾಡುವೆನಾ|| ಪ||
ಆರುತಿ ಮಾಡುವೆ ನಾರಿಯ ಗರ್ಭದಿ
ನಾರದ ಮುನಿಯಿಂದ ನಾರವ ಪಡೆದಗೆ ||ಅ.ಪ||
ಶಾಲೆಯೊಳಗೆ ದೈತ್ಯ ಬಾಲಕರಿಗೆ ಸಿರಿ
ಲೋಲನೆ  ಪರನೆಂದು ಪೇಳಿದ ಬಾಲಕಗೆ ||1||
ನಂದತೀರ್ಥರ ಮತಸಿಂಧುವಿಗೆ ಪೂರ್ಣ
ಚಂದ್ರನೆಂದೆನಿಸಿದ ಚಂದ್ರಿಕಾರ್ಯರಿಗೆ||2||
ವಂದಾರು ಜನರಿಗೆ ಮಂದಾರನೆನಿಸಿದ
ನಂದದಾಯಕ ಸುಧೀಂದ್ರಕುಮಾರಗೆ ||3||
ವೃಂದಾವನದೊಳಗೆ ನಿಂದು ಶೇವಕಜನ
ವೃಂದಾಪಾಲಕ ರಾಘವೇಂದ್ರಯತೀಂದ್ರಗೆ ||4||
ಧರೆಯೊಳು ಶರಣರ ಪೊರೆವ ಕಾರ್ಪರ
ನರಹರಿ ಯ ನೊಲಿಸಿದಂಥ ಪರಿಮಳಾಚಾರ್ಯರಿಗೆ||5||

No comments:

Post a Comment