ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ||ಪ||
ಬಾರೆ ವೆಂಕಟರಮಣಿ ನಾರಾಯಣಿ ಕೇಳುಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||ಅ.ಪ||
ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದು
ಹೀನ ಮಾನವನಿಗೆ ನೀನು ಬರುವಿ ಎಂಬೊe್ಞÁನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ ||

ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿ
ಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ ||

ಮಂಗಳಾಂಗಿಯೇ ನಿನ್ನ ನೋಡದೆ ಬಲುಭಂಗಪಡುವೆನಮ್ಮ
ಗಂಗಜನಕ ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ ||

ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆ
ಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ||

ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀ
ನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ||

No comments:
Post a Comment