ಅಂಜಬೇಡ ಬೇಡವೆಲೆ ಜೀವ - ಭವ - |
ಭಂಜನ ಹರಿಶರಣರ ತಾವ ಪ.
ಬಂದಷ್ಟರಿಂದಲಿ ಬಾಳಿಕೊ - ಬಲು - |
ಸಂದೇಹಬಂದಲ್ಲಿ ಕೇಳಿಕೊ ||
ನಿಂದಾ - ಸ್ತುತಿಗಳನು ತಾಳಿಕೊ - ಗೋ - |
ವಿಂದ ನಿನ್ನವನೆಂದು ಹೇಳಿಕೊ 1
ಮಾಧವನಿಗೆ ತನುಮನ ಮೆಚ್ಚು - ಕಾಮ - |
ಕ್ರೋಧಾದಿಗಳ ಕಲಿಮಲ ಕೊಚ್ಚು ||
ಮೋದತೀರ್ಥವಚನವೆ ಹೆಚ್ಚು - ಮಾಯಾ
ವಾದಿಮತೆಕೆ ಬೆಂಕಿಯ ಹಚ್ಚು 2
ಪರವನಿತೆಯ ರಾಶಿಯ ಬಿಡು - ನೀ
ಹರಿಸರ್ವೋತ್ತಮನೆಂದು ಕೊಂಡಾಡು ||
ಪರಮಾತ್ಮನ ಧ್ಯಾನವ ಮಾಡು - ನಮ್ಮ - |
ಸಿರಿ ಪುರಂದರವಿಠಲನ ನೀ ನೋಡು 3
No comments:
Post a Comment