Thursday, 17 October 2019

ಅಂಗನಾಮಣಿ anganamani

ಅಂಗನಾಮಣಿ ರಂಗನರಾಣಿ
ಮಂಗಳೆ ಪದಂಗಳಿಗೆರಗುವೆ ||ಪ||
ಸುರಾಸುರರು ಮಂದರಾಚಲ ಕಡೆಯುತ
ಸುರಸುಧೆ ಅರಸಿ ತಿರುಗುತ ಇರಲು
ಹರಿಯರಸಿ ಸುರಸಾಗರನುದರದಿ
ಸಿರಿದೇವಿ ನೀ ಧರೆಗಿರಿಸಿದಿ ಪದ. ||೧||
ಮುನಿಸಿಕೊಂಡು ಭೃಗುಮುನಿಯ ಪರೀಕ್ಷೆಗೆ
ಇನಿಯನ ತೊರೆದು ಧರಣಿಗಿಳಿದ ಘೃಣಿ
ಘನತರತಪಕೆ ನಿಲುಕದ ಹರಿಯಾ
ಸನಿಹ ತಂದು ತೋರಿದೆ ತ್ರಿವೇಣಿ ||೨||
ಮನ್ನಿಸಿ ಸಲಹುವ ಪ್ರಪನ್ನಭಕುತರಾ
ಧೀನನಾದ ನಿನ್ನ ಪತಿಯಾರಾಧನಗೆ
ಸನ್ನುತ ಸುಮನಸ ನೀಡಿ ಪೊರೆಯಮ್ಮ
ಘನ್ನಮಹಿಮ ಪ್ರಸನ್ನವೆಂಕಟರಾಣಿ ನಾರೀ ಶಿರೋಮಣಿ ||೩||

No comments:

Post a Comment