Friday, 18 October 2019

ಆದದ್ದಾಯ್ತಿನ್ನಾದರು adaddayotu

ಆದದ್ದಾಯ್ತಿನ್ನಾದರು ಒಳ್ಳೆ
ಹಾದಿ ಹಿಡಿಯೊ ಪ್ರಾಣಿ
ಈ ದುರ್ನಡತಿಂದೋದರಿಹಪರದಿ
ಮೋದೆಂದಿಗು ಕಾಣೆ | ಪ |
ನೆಲಾಸತಿ ಧನದೊಳನಾವರತ
ಹುಳಾಗಿ ಇರುವೆಲ್ಲೊ
ಹಲಾಪಿಡಿದು ವಿಧಿ ಕುಲಾಚರಣೇ ಬಿಡೆ-
ಪಲಾ ತರುವರಲ್ಲೊ
ಸ್ಥಳಾಸ್ಥಳರಿಯದೆ ಕಲಾಪಮಾಡ್ಯಘ-
ಕೊಳಾಗುವುದು ಸಲ್ಲೊ
ಎಲೆ ಕೇಳುವಂತಿಲಾಮಾತ್ರ ನೀ
ಗೆಲಾಹ ಬಗೆ ಇಲ್ಲೊ | ೧ |
ಶಿಲಾದಿವಿಗ್ರಹ ಥಳಾಸೆ ಹರಿಯಂ
ಬೆಲಾ ಕೇವಲ ಸುಳ್ಳೊ
ಚಲಾ ಪ್ರತಿಮಿ ಪದಗಳಾರ್ಚಿಸದಲೆ
ಮಲಾ ತಿನುತಿಹೆಲ್ಲೊ
ಕಳಾವಿಡಿದರೆ ಅನಿಳಾನ ಹರಿಮನೆ
ಮೊಳಾಗಿಹದಲ್ಲೊ
ನಳಾ ಭರತ ಮುಖ ಇಳಾಣ್ಮರಂದದಿ
ಭಲಾಯೆನಿಸಲಿಲ್ಲೊ | ೨ |
ಬಿಲಾಸೇರಿ ತಲಕೆಳಕಾಗಿ ತಪಿಸಲು
ಫಲಾಲೇಸಿನಿತಿಲ್ಲೊ
ಖಳಾರಿ ದಿನ ಬಿಂದ್ಜಲಾಕೊಳ್ಳೆನೆಂದು
ಛಲಾ ಮಾಡಲಿಲ್ಲೊ
ಬಲಾದರದಂಲಿಂ ತುಲಾದಿ ಸ್ನಾನ ಮೊ
ದಲಾದ ವ್ರತವಲ್ಲೊ
ಬಲಾರಿನುತ ಪ್ರಾಣೇಶವಿಠ್ಠಲನ
ಬಲಾ ಗಳಿಸಿಕೊಳ್ಳೊ | ೩ |

No comments:

Post a Comment