Tuesday, 22 October 2019

ಆವಗಂ ನೆನೆಮನವೆ Aavagam nene manave

ಆವಗಂ ನೆನೆಮನವೆ ಸಕಲ ಚಿಂತೆಯ ಕಡಿದು |ಕಾವುದಿದು ಕೃಷ್ಣನಾಮ ಪ.
ಭಾವಿಸಲು ಯಮದೂತ ಮದಕರಿಗೆ ಕೇಸರಿಯು |ಶ್ರೀಕೃಷ್ಣ ದಿವ್ಯನಾಮ ಅಪ
ವರವೇದ - ಶಾಸ್ತ್ರಗಳ ವ್ಯಾಸಮುನಿ ಮಥಿಸಲು ಸುಧೆಯಾದ ಕೃಷ್ಣನಾಮ |
ಪರಮಭಕುತರು ಸವಿದು ಉಂಡು ಮುನಿಗಳ ಕಿವಿಗೆಎರೆದ ಶ್ರೀ ಕೃಷ್ಣನಾಮ ||
ಗುರುದ್ರೋಣ - ಭೀಷ್ಮ - ಅಶ್ವತ್ಥಾಮ - ಜಯದ್ರಥನಜಯಿಸಿತೈ ಕೃಷ್ಣನಾಮ |
ಕುರುಸೇನೆಶರಧಿಯನು ಪಾಂಡವರ ದಾಟಿಸಿತು ಶ್ರೀ ಕೃಷ್ಣ ದಿವ್ಯನಾಮ 1
ದ್ರೌಪದೀ ದೇವಿಯಭಿಮಾನವನು ಕಾಯ್ದುದಿದು ಶ್ರೀಕೃಷ್ಣದಿವ್ಯ ನಾಮ |
ಆಪತ್ತು ಪರಿಹರಿಸಿ ಕುಕ್ಷಿಯೊಳು ಪರಿಕ್ಷೀತನ ರಕ್ಷಿಸಿತು ಕೃಷ್ಣನಾಮ ||
ಗೋಪವನಿತೆಯರೆಲ್ಲ ಕುಟ್ಟುತಲಿ - ಬೀಸುತಲಿ ಪಾಡುವುದು ಕೃಷ್ಣನಾಮ |
ತಾಪಸನು ಸಾಂದೀಪ ಮುಚುಕುಂದರಿಗೆ ಮನೋ - ರಥವು ಶ್ರೀಕೃಷ್ಣನಾಮ 2
ಸುಖದ ಅವಸಾನದಲಿ ಈ ನಾಮ ಗಾಯನವುಶ್ರೀಕೃಷ್ಣದಿವ್ಯನಾಮ |
ದುಃಖಾವಸಾನದಲಿ ಈ ನಾಮವೇ ಜಪವು ಶ್ರೀ ಕೃಷ್ಣದಿವ್ಯನಾಮ ||
ಸಕಲ ಸುಖಗಳ ಕೊಟ್ಟು ಸದ್ಗತಿಯ ನೀವುದಿದು ಶ್ರೀ ಕೃಷ್ಣದಿವ್ಯನಾಮ ||
ಸುಖವನಧಿ ಅರವಿಂದನಾಭ ಪುರಂದರವಿಠಲ ನೊಲುಮೆಯಿದು ದಿವ್ಯನಾಮ 3

No comments:

Post a Comment