Tuesday, 22 October 2019

ಆರೋಗಣೆಯ ಮಾಡೇಳಯ್ಯ Aaroganeya maadelayya

ಆರೋಗಣೆಯ ಮಾಡೇಳಯ್ಯ ಶ್ರೀಮನ್
ನಾರಾಯಣ ಭೋಗ ಸ್ವೀಕರಿಸಯ್ಯ ಪ.
ಸರಸಿಜಭವಾಂಡದ ಮೇರು ಮಂಟಪದಿ ದಿನ
ಕರಕರ ದೀಪ್ತ ಜ್ಯೋತಿಶ್ಚಕ್ರವು ||
ತರಣಿ ಮಂಡಲ ಪೋಲುವ ರತುನದ ಹೊನ್ನ
ಹರಿವಾಣದಲಿ ದೇವಿ ಬಿಡಿಸಿಹಳಯ್ಯ 1
ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್
ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||
ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿ
ಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ 2
ಹಪ್ಪಳ ಸಂಡಿಗೆ ವಿವಿಧ ಶಾಕಂಗಳು
ತುಪ್ಪ ಸಕ್ಕರೆ ಹಣ್ಣು-ಹಂಪಲವು ||
ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿ
ಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ 3
ಎಣ್ಣೂರಿಗತಿರಸ ಚೆನ್ನಾದ ಮಂಡಿಗೆ
ಅನ್ನ ಕ್ಷೀರಾನ್ನ ಪರಮಾನ್ನಗಳು ||
ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿ
ಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ 4
ನೀ ನಿತ್ಯತೃಪ್ತನಹುದು ನಿನ್ನ ಉದರದೊಳು
ನಾನಾ ಜನರು ಬಂದು ಉಣ್ಣಬೇಕೋ ||
ಶ್ರೀನಾಥ ಗದುಗಿನ ವೀರನಾರಾಯಣ
ಅನಾಥ ಬಂಧು ಶ್ರೀ ಪುರಂದರವಿಠಲ 5

No comments:

Post a Comment