Monday, 7 October 2019

ಆರಿಗೆ ವಧುವಾದೆ Aarige vadhuvade

ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ ||ಪ||
ಶರಧಿಬಂಧನ ರಾಮಚಂದ್ರಮೂರುತಿಗೋ
ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ಧನಮೂರುತಿಗೋ
ಎರಡು ಹೊಳೆಯ ರಂಗಪಟ್ಟಣವಾಸಗೋ ||
ಚೆಲುವ ಬೇಲೂರ ಚೆನ್ನಿಗರಾಯನಿಗೋ
ಕೆಳದಿ ಹೇಳುಡುಪಿನ ಕೃಷ್ಣರಾಯನಿಗೋ
ಇಳೆಯೊಳು ಪಂಢರೀಪುರನಿಲಯ ವಿಠಲೇಶಗೋ
ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ ||
ಮಲಯಜಗಂಧಿ ಬಿಂದುಮಾಧವರಾಯಗೋ
ಸುಲಭದೇವರ ಪುರುಷೋತ್ತಮನಿಗೋ
ಫಲದಾಯಕ ನಿತ್ಯಮಂಗಳನಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||
ವಾಸವಾರ್ಚಿತ ಕಾಂಚಿ ವರದರಾಜಮೂರುತಿಗೋ
ಅಸುರಾರಿ ಶ್ರೀಮುಷ್ಣದಾದಿವರಹನಿಗೋ
ಶೇಷಶಾಯಿಯಾದ ಶ್ರೀರಂಗನಾಯಕಗೋ
ಸಾಸಿರನಾಮದೊಡೆಯ ಅಳಗಿರೀಶಗೋ ||
ಶರಣಾಗತರ ಪೊರೆವ ಶಾರ್ಙ್ಗಪಾಣಿಗೋ
ವರಗಳೀವ ಶ್ರೀನಿವಾಸಮೂರುತಿಗೋ
ಕುರುಕುಲಾಂತಕ ರಾಜಗೋಪಾಲಮೂರುತಿಗೋ
ಸ್ಥಿರವಾದ ಪುರಂದರವಿಠಲರಾಯನಿಗೋ ||

No comments:

Post a Comment