Monday, 21 October 2019

ಆರಿದ್ದರೇನಯ್ಯ Aariddarenayya

ಆರಿದ್ದರೇನಯ್ಯ ನೀನಲ್ಲದೆನಗಿಲ್ಲ
ಕಾರುಣ್ಯ ನಿಧಿ ಹರಿಯೆ ಕೈಯ ಬೆಡಬೇಡ ಪ
ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರದಿಂದ ಸೆಳೆಯುತಿರೆ ಪತಿಗಳೆಲ್ಲ ||
ಗರ ಹೊಯ್ದರಂತಿದ್ದರಲ್ಲದೇ ನರಹರಿಯೆ
ಕರುಣದಿಂ ನೀನಲ್ಲದಾರು ಕಾಯ್ದವರು 1
ಅಂದು ನೆಗಳಿನ ಬಾಧೆಯಿಂದ ಗಜರಾಜನನು
ತಂದೆ ನೀ ವೈಕುಂಠದಿಂದ ಬಂದು ||
ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯ
ಸಂಧಿಯನು ಸೀಳಿ ಪೊರೆದೆಯೆಲೊ ನರಹರಿಯೇ 2
ಅಜಮಿಳನು ಕುಲಗೆಟ್ಟು ಕಾಲದೂತರು ಬರಲು
ನಿಜಸುತನ ಕರೆಯಲವನತಿ ವೇಗದಿ ||
ತ್ರಿಜಗದೊಡೆಯನೆ ಪುರಂದರ ವಿಠಲ ಕರುಣದಲಿ
ನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೇ 3

No comments:

Post a Comment