Sunday, 20 October 2019

ಆ ರಣಾಗ್ರದಿ aa ranagradi

ಆ ರಣಾಗ್ರದಿ ಭೀಮಗಡ್ಡಯಿಪರಾರು? |
ವಾರಿಧಿ ಮೇರೆದಪ್ಪಲು ನಿಲ್ಲಿಸುವವರಾರು? ಪ
ನಾನಾ ದೇಶದ ಭೂನಾಯಕರಿದ್ದರಲ್ಲವೆ
ತಾನು ದುಶ್ಯಾಸನನ ತತ್ತರಿವಾಗ ||
ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ
ಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು?1
ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿ
ತೊಡೆಗಳನು ಗದೆಯಿಂದ ತುಂಡಿಸುವಾಗ ||
ಕಡುಕೋಪದವ ಹಲಧರನೇನ ಮಾಡಿದ?
ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2
ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನ
ಕೊಂದು ಬಿಸುಡುವಾಗ ಮುಂಕೊಂಡರುಂಟೆ? ||
ಚೆಂದದಿ ಪುರಂದರ ವಿಠಲದಾಸರು ಮನ
ದಂದಕೆ ಬಂದಂತೆ ನಡೆದುದೆ ಮಾರ್ಗ 3

No comments:

Post a Comment